ಕ್ರಿಶ್ಚನ್ ಬಾವುಟ 

	ರೂಢಿಯಿಂದ ಅನೇಕ ಚರ್ಚುಗಳು ಬಳಕೆಗೆ ತಂದಿರುವ ಒಂದು ಬಾವುಟ. ಇದರ ವಿನ್ಯಾಸ ಹೀಗಿದೆ. ಬಿಳಿಯ ಆಯಾಕಾರದ ಬಟ್ಟೆಯ ಮೇಲು ಭಾಗದ ಎಡ ಕೊನೆಯಲ್ಲಿ-ಎಂದರೆ ಧ್ವಜಸ್ತಂಭದ ಕಡೆಯ ಕೊನೆಯಲ್ಲಿ-ನೀಲಿಯ ಚಿಕ್ಕ ಆಯವೊಂದಿದ್ದು ಅದರ ನಡುವೆ ಕೆಂಪು ಬಣ್ಣದ ಲ್ಯಾಟಿನ್ ಶಿಲುಬೆ ಇರುತ್ತದೆ. ನ್ಯೂಯಾರ್ಕಿನ ಧಾರ್ಮಿಕ ಶಾಲೆಯೊಂದರ (ಸಂಡೆ ಸ್ಕೂಲ್) ಮುಖ್ಯಸ್ಥನಾದ ಸಿ.ಸಿ. ಓವರ್‍ಟನ್ ಎಂಬಾತ 1897ರಲ್ಲಿ ಇದನ್ನು ರೂಪಿಸಿದನೆನ್ನಲಾಗಿದೆ. ಇದರಲ್ಲಿನ ಬಿಳಿ ಪರಿಶುದ್ಧತೆಗೂ ನೀಲಿ ನಿರ್ಭಯತೆಗೂ ಕೆಂಪು ಶಿಲುಬೆ ತ್ಯಾಗಕ್ಕೂ ಸಂಕೇತವಾಗಿದೆ.

	ಶಿಲುಬೆಯ ಚಿತ್ರವನ್ನು ಹೊಂದಿದ್ದರೂ ವಿನ್ಯಾಸದಲ್ಲಿ ಬೇರೆ ಬೇರೆಯಾಗುವ ಅನೇಕ ಬಾವುಟಗಳನ್ನು ಇತರ ಚರ್ಚುಗಳು ಬಳಸುತ್ತಲಿವೆ.												*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ